ಕ್ಯಾಮೆರಾ ಮೆನ್ ಬದುಕು ಕಸಿದ ಕರೋನ ಕೈ ಹಿಡಿದ ನರೇಗಾ ತೈವಾನ್ ಪಿಂಕ್ ಸೀಬೆ

 


ಮುಳಬಾಗಿಲು ತಾಲೂಕು ಬಲ್ಲ ಪಂಚಾಯ್ತಿಯ ಮುರಳಿ ಎಂಬ ಕ್ಯಾಮರಾಮನ್ ಜೀವನವು ಸುತ್ತಮುತ್ತಲಿನ ಹಳ್ಳಿ ಹಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮ ಗಳಿಗೆ ಕ್ಯಾಮೆರಾ ಹಿಡಿದು ಹೋಗುತ್ತಿದ್ದ, ಅಲ್ಲಿ ಬಂದಂತ ಹಣದಲ್ಲಿ ಜೀವನವು ಸುಗಮವಾಗಿ ಸಾಗಿಸುತ್ತಿದ್ದ. ಸುಮಾರು 3 ವರ್ಷಗಳ ಇಂದ ಇಡೀ ವಿಶ್ವಾದ್ಯಂತ ಬಂದಿರುವ ಕರೋನ ಎಲ್ಲಾರ ಜೀವನವನ್ನು ತಲೆಕೆಗಳಾಗಿಸಿದೆ,ಕ್ಯಾಮೆರಾ ಹಿಡಿದು ವ್ಯಕ್ತಿಯು ಜೀವನ ಮಾಡುತ್ತಿದ್ದವ  ಇಂದು ಕರೋನ ಅಲೆಗಳಿದ್ದ ಜೀವನ ನೆಡಸಲು ಬಹಳ ಕಸ್ಟಕರವಾಗಿತ್ತು. ಬಡತನ ಅತಿ ಹೆಚ್ಚಾಗಿ ಕಂಡು ದಿಕ್ಕೆಟ್ಟು ಏನಾದ್ರು ಮಾಡ್ಬೇಕು ಎಂಬ ಆಲೋಚನೆ ಬಂದಾಗ ತಮ್ಮ 2 ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಯಲು ಆಲೋಚನೆ ಮಾಡಿ... ಮೊದಲಿಗೆ ನರೇಗಾ ಯೋಜನೆಯಲ್ಲಿ ಬರುವ ಹಲವು ಯೋಜನೆಯನ್ನು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಗೆ ಭೇಟಿ ನೀಡಿ ಅದ್ರಲ್ಲಿ ವೈಯಕ್ತಿಕ ಕಾಮಗಾರಿಗಳ ಬಗ್ಗೆ ತಿಳಿದು ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ನಿರ್ಧರಿಸಿ... ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ಹೊಡೆದು ಹತ್ತಿರದ ರಾಜುಕಾಲುವೆ ಸಂಪರ್ಕ ಪಡೆದು ನೀರನ್ನು ತುಂಬಿಸಿದ್ದ. ತದನಂತರ ಪೂರ್ವಜರು ನಾಟಿ ಸೀಬೆ ಬೆಳೆಯ ಅನುಭವ ಹೊಂದಿರುವ ಕಾರಣ ನರೇಗಾ ಯೋಜನೆಯಲ್ಲಿ ಸಿಗುವ ತೋಟಗಾರಿಕೆ ಬೆಳೆಯ ಬಗ್ಗೆ ಅಭಿಯಾನಗಳಲ್ಲಿ ಮಾಹಿತಿ ಪಡೆದು ತೋಟಗಾರಿಕೆ ಇಲಾಖೆಯಲ್ಲಿ ಸೀಬೆಗೆ ಅರ್ಜಿಯನ್ನು ಹಾಕಿ.... ತಮ್ಮ 2 ಎಕರೆಯಲ್ಲಿ 2 ಲಕ್ಷ ಅನುಧಾನದಲ್ಲಿ ತೈವಾನ್ ಪಿಂಕ್ ಸೀಬೆಯನ್ನು ಬೆಳೆಯಲು ಮುಂದಾದ ... ಇದೀಗ ಸುಮಾರು ಪ್ರತಿ ತಿಂಗಳು 30 ಸಾವಿರದಿಂದ 40 ಸಾವಿರ ರೂಪಾಯಿಗಳನ್ನು ಆದಾಯ ಮಾಡಿ ನರೇಗಾ ಯೋಜನೆಯ ಸೌಲಭ್ಯ ಪಡೆದು ಕುಟುಂಬದ ಸಮೇತ ಸೀಬೆ ಗಿಡಗಳಲನ್ನು ಮಕ್ಕಳಂತೆ ನೋಡಿಕೊಂಡು ಪ್ರತಿ ದಿನವೂ ತೋಟದಲ್ಲಿ ಸಂತೋಷವಾಗಿ ಕಾಲ ಕಳೆಯುತ್ತಾ ಆದಾಯವನ್ನು ಗಳಿಸುತ್ತಿದ್ದಾರೆ.


Comments