ನರೇಗಾ ಯೋಜನೆ – ಹಿರಿಯ ನಾಗರಿಕರಿಗೆ ಆದ್ಯತೆ

 ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ದೊಮ್ಮಸಂದ್ರ ಗ್ರಾಮದ ಹಿರಿಯ ನಾಗರಿಕರನಾದ ಸೀನಪ್ಪ ನವರು ತಮ್ಮ ಸರ್ವೆ ನಂಬರ್ 17/2A ನಲ್ಲಿ ಒಂದು ಎಕರೆ ಜಮೀನಿನಲ್ಲಿ ನೀರಾವರಿ ಸೌಲಭ್ಯ ಹೊಂದಿದ್ದು, ಹಲವಾರು ವರ್ಷಗಳಿಂದ ಜಮೀನಿನಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದರು. ತದನಂತರ ಅದ ಕೆಲವೊಂದು ಬದಲಾವಣೆಗಳಿಂದ ತಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಕುಂಠಿತವಾಗಿ ಜೀವನ ನಡೆಸಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿ ಕಷ್ಟಕರ ಜೀವನ ನಡೆಸಲು ಆರಂಭಿಸಿದ್ರು... ಅಂತಹ ಸಂದರ್ಭದಲ್ಲಿ ನಮ್ಮ ನರೇಗಾ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ತಮ್ಮ ಜಮೀನಿನಲ್ಲಿ ಏನಾದ್ರು ಬೆಳೆ ಹಾಕಲು ನಿರ್ಧರಿಸಿ ನೇರವಾಗಿ ರೇಷ್ಮೆ ಇಲಾಖೆಯನ್ನು ಸಂಪರ್ಕಿಸಿದ್ರು...

 ನರೇಗಾ ಯೋಜನೆಯಲ್ಲಿ ಸಿಗುವ ರೇಷ್ಮೆ ಬೆಳೆಯ ಸಂಪೂರ್ಣ ಮಾಹಿತಿಯನ್ನು ಪಡೆದು ತಮ್ಮ ಜಮೀನಿನಲ್ಲಿ ಯಾವ ತರಹ ರೇಷ್ಮೆ ಬೆಳೆ ಬೆಳೆಯಲು ಅನುಕೂಲವಾಗುತೋ ವಿವರಿಸಿ.. ಹಾಗೂ ಯೋಜನೆಯಲ್ಲಿ ಹಣ ಸಿಗುವ ವಿವರವನ್ನು ತಿಳಿದುಕೊಂಡು ತಮ್ಮ 1 ಎಕರೆ ಜಮೀನಿನಲ್ಲಿ ರೇಷ್ಮೆ ನಾಟಿ ಮಾಡಲು ಬೇಡಿಕೆಯನ್ನು ನೀಡಿದರು... 

ವಾಣಿಜ್ಯ ಬೆಳೆಗಳನ್ನು ಬೆಳೆದು ಸ್ವಲ್ಪ ಆರ್ಥಿಕತೆ ಹಿಡಿತ ಇಲ್ಲದಿರುವುದರಿಂದ ರೇಷ್ಮೆ ಬೆಳೆಗೆ ಮುಖ ಮಾಡಿ ತಮ್ಮ ಜಮೀನಿನಲ್ಲಿ ರೇಷ್ಮೆ ಗಿಡಗಳು ನಾಟಿ ಮಾಡಿ ರೇಷ್ಮೆ ಗೂಡು ಸಾಕಲು ಪ್ರಾರಂಭಿಸಿ ಒಂದು ವರ್ಷದಿಂದ ತಮ್ಮ ಮನೆಯವರ ಸಹಾಯದಿಂದ ರೇಷ್ಮೆ ಬೆಳೆಯಿಂದ ರೇಷ್ಮೆಗೂಡು ಮಾಡಿ, ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡು ಜೀವನ ಇಂದು ಸುಖಕರವಾಗಿದ್ದು, ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಕೊಂಡಿದ್ದಾರೆ.


Comments