ಕಲ್ಯಾಣಿಗೆ ಗತ ವೈಭವ ನೀಡಿದ ನರೇಗಾ



ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಆಚರಣೆಗಳು, ವಿಚಾರಗಳು, ಅನುಭವದಲ್ಲಿ ಹಲವಾರು ವರ್ಷಗಳ ಹಿಂದೆ ಪೂರ್ವಜರು ಮುಂದಿನ ಪೀಳಿಗೆಗೆ ಬೇಕಾದ ರೀತಿಯಲ್ಲಿ ಎಲ್ಲಾ ವರ್ಗದ ವಿಷಯಗಳು ವಿಸ್ತಾರವಾಗಿ ಬೇಕಾಗುವ ಅನುಕೂಲಗಳು ಮಾಡಿದ್ದಾರೆ. ಆನಾದಿ ಕಾಲದ ಜನರು ನೀರಿನ ಬವಣೆ ನೀಗಿಸಲು ಹಲವಾರು ಕಾರ್ಯಕ್ರಮಗಳು ಹಾಕಿಕೊಂಡು ವ್ಯವಸ್ಥಿತವಾಗಿ ಕೆರೆ ಕಟ್ಟೆ , ತೂಬು, ಕಾಲುವೆ, ಕುಂಟೆ,ಕಲ್ಯಾಣಿ ಗಳ ನಾಜೂಕಾಗಿ ತಂತ್ರಜ್ಞಾನ ಆಧಾರಿತವಾಗಿ ನಿರ್ಮಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಗಡಿ ಅಂಚಿನಲ್ಲಿರುವ ಹೆಬ್ಬಣಿ ಗ್ರಾಮ ಪಂಚಾಯಿತಿಯ ಎಚ್ ಕೋಡಿಹಳ್ಳಿ ಗ್ರಾಮದಲ್ಲಿ ಸುಮಾರು 1505 ನೇ ಇಸವಿಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರು ಆಳ್ವಿಕೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಮಾಡಿದ್ದು, ನೀರಿನ ಮೂಲಗಳ ಮೇಲೆ ಪ್ರಭಾವ ಬೀರಿದ್ದರು. ಬರು ಬರುತ್ತಾ ರಾಜರ ಕಾಲದ ಅನೇಕ ನೀರಿನ ಮೂಲಗಳು ಕಡೆ ಗಮನ ಹರಿಸದೆ ಕಣ್ಣಿಗೆ ಕಾಣದ ರೀತಿಯಲ್ಲಿ ಎಲ್ಲಾ ವಿನಾಶದ ಅಂಚಿಗೆ ಸೇರಿವೆ.. ಅಂತಹದ್ದು ಎಚ್. ಕೋಡಿಹಳ್ಳಿ ಗ್ರಾಮದ ಒಂದು ಕಲ್ಯಾಣಿ ಯು ಆಗಿದೆ. ....

ಈ ಕಲ್ಯಾಣಿಗಳು ನಿರ್ಮಾಣವು ವಿಶಿಷ್ಟವಾದ ಆಕಾರಗಳನ್ನು ಹೊಂದಿದ್ದು ನೀರಿನ ಪ್ರಮಾಣ , ಸೋರಿಕೆ, ಬಳಕೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇವಸ್ಥಾನ, ಜನರಿಗೆ ಸಾಂಪ್ರದಾಯಿಕ ವಿಚಾರಗಳಿಗೆ ಬೇಕಾಗುವ ರೀತಿಯಲ್ಲಿ ನಿರ್ಮಿಸಿದ್ದಾರೆ. ಹೆಬ್ಬಣಿ ಗ್ರಾಮ ಪಂಚಾಯಿತಿ ಎಚ್ ಕೋಡಿಹಳ್ಳಿ ಗ್ರಾಮದಲ್ಲಿ ನರೇಗಾ ಕೂಲಿಕಾರರು ಸುಮಾರು 2 ಲಕ್ಷ ವೆಚ್ಚದಲ್ಲಿ ಕಲ್ಯಾಣಿ ಕಾಮಗಾರಿಯನ್ನು ನರೇಗಾ ಯೋಜನೆಯಲ್ಲಿ ಪಡೆದು ಗ್ರಾಮಸ್ಥರು ಸೇರಿ ಕಣ್ಣಿಗೆ ಕಾಣದ ರೀತಿಯಲ್ಲಿ ಇದ್ದ ಕಲ್ಯಾಣಿ ಪುರಾತನ ಕಾಲದ ಜನರು ನಿರ್ಮಿಸಿದ್ದ  ವೈಭವನ್ನು ಮರಳಿ ನೀಡಲಾಗಿದೆ. ಇದೀಗ ಗತ ವೈಭವವನ್ನು ನೀಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ನರೇಗಾ ಯೋಜನೆಯನ್ನ ಹಾಗೂ ಯೋಜನೆ  ಬರುವ ಕಾಮಗಾರಿಗಳ ಕಡೆ ಗಮನ ಹೆಚ್ಚಾಗಿ ಹರಿಸಲಾಗಿದೆ.


Comments